ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಜಗನ್ನಾಥ ಶೆಟ್ಟಿ ಆಯೋಗದ ವರದಿ ಸದ್ಯದಲ್ಲಿಯೇ ಮಂಡನೆ

ಭಟ್ಕಳ: ಜಗನ್ನಾಥ ಶೆಟ್ಟಿ ಆಯೋಗದ ವರದಿ ಸದ್ಯದಲ್ಲಿಯೇ ಮಂಡನೆ

Thu, 12 Nov 2009 02:37:00  Office Staff   S.O. News Service
ಭಟ್ಕಳ, ನವೆಂಬರ್ 11: ಮಾಜಿ ಶಾಸಕ ಡಾ.ಯು.ಚಿತ್ತರಂಜನ್ ಹತ್ಯೆಗೆ ಸಂಬಂಧಿಸಿದ ರಾಮಚಂದ್ರ ಆಯೋಗದ ವರದಿಯನ್ನು ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮಂಡಿಸಲಾಗಿದೆ. 1993ರ ಭಟ್ಕಳ ಗಲಭೆಗೆ ಸಂಬಂಧಿಸಿದ ಜಗನ್ನಾಥ ಶೆಟ್ಟಿ ಆಯೋಗದ ವರದಿಯು ಇದೀಗ ಕಾನೂನು ಇಲಾಖೆಯ ಕೈ ಸೇರಿದ್ದು, ಪರಿಶೀಲನೆಯ ನಂತರ ಸದ್ಯದಲ್ಲಿಯೇ ಮಂಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೇರಿ ಹೇಳಿದ್ದಾರೆ.
 
ವರದಿಯ ಕೆಲವೊಂದು ಭಾಗವನ್ನು ಕೈ ಬಿಡಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಹಾಗೇನೂ ಇಲ್ಲ ಎಂದು ಉತ್ತರಿಸಿದ ಅವರು, ತಿಮ್ಮಪ್ಪ ನಾಯ್ಕ ಹತ್ಯೆಯ ತನಿಖೆಯೂ ಚುರುಕಾಗಿದ್ದು, ಜನರ ಕುತೂಹಲಕ್ಕೆ ಮಂಗಳ ಹಾಡಲಾಗುವುದು ಎಂದು ತಿಳಿಸಿದರು.




Share: